ನವದೆಹಲಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ 1 ನೇ ದಿನದಂದು ರಿಶಬ್ ಪಂತ್ ಕೆಲವು ಕ್ಯಾಚ್ ಗಳನ್ನು ಡ್ರಾಪ್ ಮಾಡಿರುವುದು ಈಗ ಅವರ ವಿಕೆಟ್ ಕೀಪಿಂಗ್ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ಈಗ ರಿಷಭ್ ಪಂತ್ (Rishabh Pant) ಕೀಪಿಂಗ್ ಸಾಮರ್ಥ್ಯದ ಬಗ್ಗೆ ಮಾಜಿ ನಾಯಕ ರಿಕಿ ಪಾಂಟಿಂಗ್ ಪ್ರಶ್ನೆಗಳನ್ನು ಎತ್ತಿದ್ದಾರೆ.ಆಸ್ಟ್ರೇಲಿಯಾದ ಯುವ ಆರಂಭಿಕ ಆಟಗಾರ ವಿಲ್ ಪುಕೊವ್ಸ್ಕಿಯನ್ನು ಮೂರು ಓವರ್‌ಗಳಲ್ಲಿ ಎರಡು ಬಾರಿ ಕೈಬಿಟ್ಟರು. ಪುಕೋವ್ಸ್ಕಿ26 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪಂತ್  ಕ್ಯಾಚ್ ಕೈಬಿಟ್ಟರು.


ಇದನ್ನೂ ಓದಿ: ಕೆ.ಎಲ್ ರಾಹುಲ್, ಪಂತ್, ಸಂಜು ಸ್ಯಾಮ್ಸನ್ ನಡುವೆ ಧೋನಿ ಸ್ಥಾನಕ್ಕೆ ಯಾರು ಸೂಕ್ತರು ? ಲಾರಾ ಉತ್ತರ ಇಲ್ಲಿದೆ !


ಮೂರು ಓವರ್‌ಗಳ ನಂತರ, ಮೊಹಮ್ಮದ್ ಸಿರಾಜ್ ಬೌನ್ಸರ್ ಗೆ ಪುಕೋವ್ಸ್ಕಿಪುಲ್ ಶಾಟ್  ಮಾಡಲು  ಪ್ರಯತ್ನಿಸಿದನು, ಆಗಲೂ ಕೂಡ ಪಂತ್ ಕ್ಯಾಚ್ ಹಿಡಿಯಲು ವಿಫಲರಾಗಿದ್ದಾರೆ. ಎರಡನೇ ಪ್ರಯತ್ನದಲ್ಲಿ ಪಂತ್ ಅದನ್ನು ಹಿಡಿಯುವಲ್ಲಿ ಯಶಸ್ವಿಯಾದರು, ಆದರೆ ಚೆಂಡು ಆಗಲೇ ನೆಲಕ್ಕೆ ಅಪ್ಪಳಿಸಿತು ಮತ್ತು ಪುಕೊವ್ಸ್ಕಿಯನ್ನು ನಾಟ್ ಔಟ್ ಎಂದು ಘೋಷಿಸಲಾಯಿತು. ದೆಹಲಿ ಕ್ಯಾಪಿಟಲ್ಸ್‌ನಲ್ಲಿ ಪಂತ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಪಾಂಟಿಂಗ್ (Ricky Ponting) ಅವರು ಈಗ ಅವನ ವಿಕೆಟ್ ಕೀಪಿಂಗ್ ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Watch video: ಅಶ್ವಿನ್ ಆರನ್ ಫಿಂಚ್‌ಗೆ ಬೆದರಿಕೆ ಹಾಕಿದ್ದನ್ನು ಕಂಡು ರಿಂಕಿ ಪಾಂಟಿಂಗ್‌ಗೂ ನಗು ತಡೆಯಲಾಗಲಿಲ್ಲ!


'ಇಂದು ಕೈಬಿಡಲಾದ ಎರಡು ಕ್ಯಾಚ್‌ಗಳು ಸರಳವಾಗಿದ್ದವು. ಆದರೆ ಅದೃಷ್ಟವಶಾತ್ ಪುಕೋವ್ಸ್ಕಿ ಮುಂದುವರೆದು ಶತಕ ಅಥವಾ ದ್ವಿಶತಕ ಗಳಿಸಲಿಲ್ಲ ಮತ್ತು ವಿಕೆಟ್ ನೋಡಿದರೆ ಅದು ನಂಬಲಾಗದ ಮೇಲ್ಮೈಯಂತೆ ಕಾಣುತ್ತದೆ, ರಿಷಭ್‌ಗೆ ಬಹುಶಃ ಅದೃಷ್ಟವಿದೆ"ಎಂದು ಪಾಂಟಿಂಗ್ ಕ್ರಿಕೆಟ್.ಕಾಂಗೆ ತಿಳಿಸಿದರು. ಇನ್ನು ಮುಂದುವರೆದು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ, ಅವರು ವಿಶ್ವದ ಇತರ ಕೀಪರ್‌ಗಳಿಗಿಂತ ಹೆಚ್ಚಿನ ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.ಅದು ಅವರ ಕೀಪಿಂಗ್‌ ವಿಚಾರವಾಗಿ ಶ್ರಮವನ್ನು ವಹಿಸಬೇಕಾಗಿದೆ ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ


Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.